ಏನೀ ಉನ್ಮಾದ?

        ಬ್ರಹ್ಮಾಂಡದ ಜಿಜ್ಞಾಸೆಗೋ, ಸಮಾಜದ ವೈಪರೀತ್ಯಗಳಿಗೋ, ಜೀವನದ ಸೌಂದರ್ಯಕ್ಕೋ, ಪ್ರಕೃತಿಯ ಸೂಕ್ಷ್ಮಕ್ಕೋ, ಬಾಳಿನ ಏಳು-ಬೀಳುಗಳಿಗೋ ಸ್ಪಂದಿಸಿ ಅರಳುವ ಭಾವನೆಗಳಿಗೆ ಉಪಮೆ, ಛಂದಸ್ಸುಗಳ ಬಣ್ಣ ಕಟ್ಟಿ , ತನ್ನ ನೋವ್ನಲಿವುಗಳನ್ನು, ರೋಮಾಂಚನಗಳನ್ನು, ವಿರಹ-ಆಕ್ರೋಶಗಳನ್ನು ಕವಿತೆಯಲ್ಲಿ ಸೆರೆ ಹಿಡಿಯುವ ಮಾಂತ್ರಿಕನು ಹೇಗೆ ಕವಿಯೋ ಹಾಗೆಯೇ ಜೀವನಾನುಭವಗಳ ಪುಳಕ, ಸಮ್ಮೋಹನ, ಸಂತಸ, ಅಳಲು, ಆಕ್ರಂದನಗಳನ್ನು ತನ್ನ ಭಾವಾಭಿವ್ಯಕ್ತಿಗೆ ಅನುಗುಣವಾಗಿ ಹೆಕ್ಕಿ ಆಸ್ವಾದಿಸುವವನೂ ಕವಿಯೇ ಎಂಬುದು ನಮ್ಮ ಅಭಿಪ್ರಾಯ.
        ಕವಿತೆಗಳ ಭಾವಸಾಗರದೊಳಗೆ ಒಮ್ಮೆ ಮಿಂದೆದ್ದರೆ ಮತ್ತೆ ಮತ್ತೆ ಅದರಲಿಳಿದು ಈಜಬೇಕೆಂಬ ಹಂಬಲ. ಆ ಕ್ಷಣಗಳಲ್ಲಿ ನಮಲ್ಲಿ ಏನೋ ಒಂದು ಬಗೆಯ ಉನ್ಮಾದ ಉದಯಿಸುವುದು. ಕವಿತೆಗಳ ಲೋಕದಲ್ಲಿ ವಿಹರಿಸಿದಷ್ಟು ಉದ್ದೀಪನಗೊಳುವುದು ಈ ಉನ್ಮಾದ. ಇಂತಹ ಕಾವ್ಯದ ಅಮಲೇರಿರುವ  ವ್ಯಸನಿಗಳೆಲ್ಲರಿಗೂ ಇದು ಆ ಉನ್ಮಾದ ವೃದ್ದಿಸುವ ಅಡ್ಡ!

    
ಕಾವ್ಯದ ಕುರಿತು ನಮ್ಮ ತಿಮ್ಮ ಗುರು "ಡಿ ವಿ ಗುಂಡಪ್ಪ" ನವರ ನುಡಿಮುತ್ತುಗಳು :
                  "ಕಾವ್ಯವೆಂಬುದು ಒಬ್ಬ ಪ್ರತಿಭಾಶಾಲಿಯು ಜಗತ್ತಿನೊಡನೆ ನಡೆಸುವ ಸಲ್ಲಾಪ: ಅದರ ಕೂಗಿಗೆ ಅವನ ಮರುಕೂಗು; ಅದರ ಸಂತಾಪಕ್ಕೆ ಅವನ ಅನುತಾಪ. ಅದರ ಸಂತೋಷಕ್ಕೆ ಅವನ ಪಾರಿತೋಷ; ಅದರ ಪ್ರಶ್ನೆಗೆ ಅವನ ಸಮಾಧಾನ; ಅದರ ಆಯಾಸಕ್ಕೆ ಅವನ ಉಪಚಾರ; ಅದರ ಬೇಸರಕ್ಕೆ ಅವನ ವಿಕಟ ವಿನೋದ; ಅದರ ಕಾಲಯಾಪನೆಗೆ ಅವನ ಒಗಟು ಹರಟೆ; ಅದರ ಕುತೂಹಲಕ್ಕೆ ಅವನ ಆಕಾಶ ಪುರಾಣ; ಅದರ ಅಕಾಲನಿದ್ರೆಗೆ ಅವನ ಭೇರೀಧ್ವಾನ  - ಇತ್ಯಾದಿ.
                   ಅದು ಸೌಂದರ್ಯ ಸಂದೇಶ."

7 ಕಾಮೆಂಟ್‌ಗಳು:

  1. hello chiranjeevi ee Kaavyaalaapa, sallapa, ella namma kaaladavarige maatra anthidhe. Aadre nimmantha hudugranna nodidre thumbaane santhosha or swalpa eershye. Please carry on. Aa Vishwachethana nimage olleyadannu maadli. one old proverb chandrashekara aloorara pusthakadalli odida nenapu
    Don't walk infront of me I may not follow. Don't walk behind me I may not lead. just walk beside me as a friend forever. Good night. Suri

    ಪ್ರತ್ಯುತ್ತರಅಳಿಸಿ
  2. ಉನ್ಮಾದ ತಾನಾಗಿ ಹಾಡಾಗೋ ಸಮಯ, ಏಕಾಂತ ಕಲ್ಲನ್ನೂ ಮಾಡುವುದೋ ಕವಿಯ!" - sir idu Hrudaya shiva avara lyric

    ಪ್ರತ್ಯುತ್ತರಅಳಿಸಿ
  3. ಉನ್ಮಾದವಿದೆ ಅದರಲ್ಲೆ
    ನಮ್ಮೆಲ್ಲರ ಮೋದವಿದೆ

    ಪ್ರತ್ಯುತ್ತರಅಳಿಸಿ
  4. ಅದ್ಬುತ ಪ್ರಯತ್ನ.... It wud b grt if u develop an unmaada app...

    ಪ್ರತ್ಯುತ್ತರಅಳಿಸಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....