ಕೋಮಲವೆನ್ನುತ ಮುತ್ತಿಡುವೆ;
ಹೂವಿನ ಪೆಂಪಿಗೆ ಬಾಳನು ಕೊಟ್ಟಾ
ಮೊಳಕೆಯ ಗೋಳನು ನೀನರಿಯೆ!
ಬುವಿಯನು ನೋಡುತ ಸೊಬಗಿಗೆ ಮೆಚ್ಚಿ,
ಕವಿಯೇ, ಕವಿತೆಯ ವಿರಚಿಸುವೆ;
ಬುವಿಯಾನಂದಕೆ ಜೀವವನಿತ್ತಾ
ಕರ್ತನ ವೆದನೆಯರಿತಿಹೆಯ?
ಯುಗ ಯುಗ ಯುಗಗಳ ಯಾತನೆಯಿಂದ
ಜನಿಸಿತು ನಲಿವೀ ಬ್ರಹ್ಮಾಂಡ;
ನಲಿಯುವ ಒಂದೊಂದಲರಿನ ಹೃದಯದಿ
ಬ್ರಹ್ಮವು ಮೌನದಿ ನರಳುತಿದೆ!
ಮುಂದಕೆ ನೋಡುವ ಕವಿಗಳ ಕಣ್ಣಿಗೆ
ಬ್ರಹ್ಮವು ಹರ್ಷದಿ ಕುಣಿಯುತಿದೆ;
ಹಿಂದಕೆ ನೋಡುವ ಋಷಿಗಳ ಕಣ್ಣಿಗೆ
ಯಾತನೆಯಿಂದದು ಹೊರಳುತಿದೆ!
- ಕುವೆಂಪು
( 'ಕೊಳಲು' ಕವನ ಸಂಕಲನದಿಂದ )ಸತ್ಯ
I want this explanation now
ಪ್ರತ್ಯುತ್ತರಅಳಿಸಿI want this explain
ಅಳಿಸಿI want explanation
ಅಳಿಸಿSummary
ಅಳಿಸಿ