ಚೈತನ್ಯದ ಪೂಜೆ ನಡೆದSದ
ನೋಡS ತಂಗಿ।। ಅಭಂಗದ ಭಂಗೀS ।। ಪ ।।
೧
ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ
ಸಾಮರ್ಥ್ಯ ಎಂಬುದು ಬೆಲಪತ್ರಿ
ಶಿವಗರ್ಪಿತ ಇರಲಿ ಖಾತ್ರಿ.
೨
ಸತ್ಯ ಎಂಬುವ ನಿತ್ಯದ ದೀಪ
ಸುತ್ತೆಲ್ಲಾ ಅವನದೇ ರೂಪ
ಪ್ರೀತಿ ಎಂಬುವ ನೈವೇದ್ಯ
ಇದು ಎಲ್ಲರ ಹೃದಯದ ಸಂವೇದ್ಯ.
೩
ಸೌಂದರ್ಯ ಧ್ಯಾನಾ ಎದೆಯಲ್ಲಿ
ಅಸ್ಪರ್ಶಾ ಚಿನ್ಮಯದಲ್ಲಿ
ಆನಂದಗೀತ ಸಾಮSವೇದಾ
ಸರಿಗಮ ನಾದಾ.
೪
'ಉದ್ಭವ' 'ಉದ್ಭವ' ಹೇ ಮಂಗಳ ಮೂರ್ತಿ
ಅಲಲಾ! ಆಹಹಾ! ಅಮಮಾ!
ಆತ್ಮಾ ಪರಮಾತ್ಮಾ ಅಂತSರಾತ್ಮಾ
ಘನವೋ ಘನ! ನಿಮ್ಮಾ ಮಹಿಮಾ!
- ದ ರಾ ಬೇಂದ್ರೆ
( 'ನಾಕುತಂತಿ' ಕವನ ಸಂಕಲನದಿಂದ)
ವಿಶೇಷ : ಬೇಂದ್ರೆಯವರು ತಮ್ಮ ಪ್ರಥಮ ಮೊಮ್ಮಗ ಚಿ. ಪ್ರಭಾಕರನ ಧ್ಯಾನಕ್ಕಾಗಿ ರಚಿಸಿದ ಸಾಧನಾಗೀತ ಇದು.
ಅತ್ಯುತ್ತಮ ಪರಿಕಲ್ಪನೆ..... 👌
ಪ್ರತ್ಯುತ್ತರಅಳಿಸಿಜ್ಯೋತಿ
ಪ್ರತ್ಯುತ್ತರಅಳಿಸಿಬಸವರಾಜ್
ಪ್ರತ್ಯುತ್ತರಅಳಿಸಿ