ಬಾಲಬೋಧೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಾಲಬೋಧೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಒಂದು

೧
ಆದರೂ ಹೋದರೂ
ಎಲ್ಲಾ ದಂತಕಥೀ
ಇರುವವರ ಸ್ಥಿತೀ - ಗತೀ
ಮುಂಗಾಣದೋ !

೨
ಇದ್ದದ್ದು ಇಲ್ಲದ್ದು
ಒಂದೇ ಮಾಡಬೇಡಾ
ಶುದ್ಧಿ ಇಲ್ಲದಾ ಸುದ್ಧಿ
ಬರಿದೋ ಅಶುದ್ಧೀ

೩
ಮಾತಿನೊಳಗಿನ ಭಾವ
ಮೌನದೊಳಗಿನ ಜೀವಾ
ಅಂದದ್ದೆಲ್ಲಾ
ಚೆಂದಾ
ಹೇಗಾದೀತು ?

                                     - ದ. ರಾ. ಬೇಂದ್ರೆ 
                       ('ಬಾಲಬೋಧೆ' ಕವನ ಸಂಕಲನದಿಂದ)