ಚಿತ್ರ ಕೃಪೆ: http://pixdaus.com/single.php?id=194871 |
ಬಿಸಿಲು ತೂಗಾಡುತಿದೆ;
ಚುಕ್ಕಿಯುದ್ಯಾನದಲಿ
ಹಕ್ಕಿ ಹಾರಾಡುತಿದೆ;
ಒಡಲವೀಣೆಯ ನಡುವೆ
ನುಡಿಯಿಲ್ಲದಿಂಚರಕೆ
ಮೊದಲು ತೊದಲಿನ ತುಟಿಯ
ಕೆಂಪು ತೆರೆಯುತಿದೆ!
ಮೈವೆತ್ತ ಗಾನಕ್ಕೆ
ಸುಖರಸದ ತಾನಕ್ಕೆ
ತನ್ನ ಸಂತಾನಕ್ಕೆ
ಸೃಷ್ಟಿ ಮರೆಯುತಿದೆ!
- ಕುವೆಂಪು
('ಪ್ರೇಮ ಕಾಶ್ಮೀರ' ಕವನ ಸಂಕಲನದಿಂದ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....