ದೇವರು ಸೆರೆಯಾಳ್, ದೇಗುಲ ಸೆರೆಮನೆ,
ಕಾವಲು ಪೂಜಾರಿ!
ನೀನಾವಾಗಲು ನನ್ನಯ ಬಳಿಯಿರೆ
ಬಲು ತೊಂದರೆ ಎಂದು
ಗಿರಿಶಿಕರದೊಳತಿದೂರದಿ ಕಟ್ಟಿದೆ
ಗುಡಿಯನು ನಿನಗೊಂದು;
ಕಲ್ಲಿನ ಗೋಪುರ, ಕಲ್ಲಿನ ಗೋಡೆ,
ದುರ್ಗದವೊಲೆ ಬಲು ದುರ್ಗಮ ನೋಡೆ!
ಸೆರೆಯನು ತಪ್ಪಿಸಿ ಕೊಳ್ಳದ ತೆರದಲಿ
ಅರ್ಚಕ ರಕ್ಷೆಯಿದೆ;
ತೆಂಗಿನ ಕಾಯೊಳೆ ತಲೆಯನು ಬಡಿಯುವ
ಪೂಜೆಯ ಶಿಕ್ಷೆಯಿದೆ!
ಪುರಸತ್ತಾದರೆ ಕೆಲಸದೊಳಿಲ್ಲಿ
ಬೇಸರ ಪರಿಹಾರಕೆ ಬಹೆನಲ್ಲಿ!
- ಕುವೆಂಪು
('ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನ ಸಂಕಲನದಿಂದ)
ದೇವರು ಮಾತು ಪೂಜಾರಿ ಕವನಾಧ saramsha wanu bareeri
ಪ್ರತ್ಯುತ್ತರಅಳಿಸಿ