ಬದುಕಿನ ಹಾದ್ಯಾಗ ನೋವಿನ ಅನುಭವ
ತೊರೆ ತೊರೆದು ಹರಿದಾಂಗ ಆಗ್ಯಾವ
ಹಸಿರು ಚೆಲ್ಲಿದ ಹಾದಿ ಕಣ್ಣಿಗೆ ಬಿದ್ದಾಗ
ಮನವೆದ್ದು ಉದದಿಂದ ಕುಣಿದಾವ
ಬರ ಸಿಡಿಲು ಬಡಿದಾಗ ಬಾಳೆಲ್ಲ ಬರುಡಾಗಿ
ಜೀವ ದೇವದ ಹಂಗು ಮರೆತಾವ
ಕರುಣೆಯ ಜರಿಯೊಂದು ಜುಳು ಜುಳು ಜುಳು
ಹರಿದಾಂಗ ಬದುಕೆಲ್ಲ ಬನವಾಗಿ ಅರಳ್ಯಾವ
ಬ್ಯಾಸರಿಕೆ ಬಂದ್ದೊಮ್ಮೆ ಹುಸ್ಯೆಂದು ಕುಳಿತಾಗ
ಆಸೆಯ ಗೆರೆಗಳು ಬತ್ಯಾವ
ಹೋರಾಟದ ಉಸಿರೊಂದು ಚಕ್ಕನ ಚಿಮ್ಮಿದಾಗ
ನರನಾಡಿ ತುಂಬೆಲ್ಲ ಹರೆದಾವ
ಇದು ನಮ್ಮ ಕರ್ಮವೆಂದು ಇದು ನಮ್ಮ ಪಾಪವೆಂದು
ಬಾಳೆಲ್ಲ ಇಸಗಾಯಿ ಆಗ್ಯಾವ
ಕರ್ಮವ ಕಿತ್ತೊಗೆದು ಮೌಡ್ಯವ ಹರಿದೊಗೆದು
ಮುಂದೆ ಬಂದರ ಫಲವು ಕಂಡಾವ
- ಡಾ || ಬಸವರಾಜ ಸಬರದ
ಪು ತಿ ನ ರವರ ಹೃದಯ ವಿಹಾರಿ ಹರಿ ಪದ್ಯವನ್ನು ದಯಮಾಡಿ upload ಮಾಡಿ
ಪ್ರತ್ಯುತ್ತರಅಳಿಸಿ